ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ನಿರ್ಲಕ್ಷ್ಯವಹಿಸುತ್ತಿದೆ ಎಂದು ರೈತ ಹೋರಾಟಗಾರ ಕುರುಬೂರ ಶಾಂತಕುಮಾರ್ ಹೇಳಿದರು . ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು , ಮಳೆಯಿಂದಾಗಿ ರೈತರ ಬೆಳೆಗಳು ಹಾಳಾಗಿದೆ . ಆದ್ರೆ ಸರ್ಕಾರ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದೆ . ಇನ್ನು ಭಿಕ್ಷಾ ರೂಪದ ಪರಿಹಾರ ರೈತರಿಗೆ ಬೇಡ . ನೈಜ ವರದಿಯ ಪ್ರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು ಬೆಂಗಳೂರು ವಿಧಾನಸೌಧ ಚಲೋ ಸೆಪ್ಟೆಂಬರ್ 26 ರಂದು ಹಮ್ಮಿಕೊಳ್ಳಲಾಗಿದೆ ವಿದ್ಯುತ್ ಖಾಸಗೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬೆಂಗಳೂರು ಚಲೋ ನಡೆಯಲಿದೆ ಎಂದರು.ಸಕ್ಕರೆ ಕಾರ್ಖಾನೆಗಳ ಮಾಲೀಕರು ಶಾಸಕರು , ಸಚಿವರು ಹೊಂದಿದ್ದಾರೆ . ಇದರಿಂದ ರೈತರ ಕಬ್ಬಿನ ಬೆಳೆಗಳಿಗೆ ನೈಜ ಬೆಲೆ ಸಿಗುತ್ತಿಲ್ಲ . ಕೇಂದ್ರ ಸರ್ಕಾರದ ಪರಿಹಾರ ನೀಡುವ ಭರವಸೆ ನೀಡಿ ವಿಫಲವಾಗಿದೆ ಎಂದು ಕಿಡಿಕಾರಿದರು .