Menu Close

ವಿಜಯಪುರ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕಟ್ಟಡ ಕಾರ್ಮಿಕರು !

ಕಟ್ಟಡ ಕಾರ್ಮಿಕರ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚದಂತೆ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಳೆದ ಎರಡು ವರ್ಷದಿಂದ ಕಟ್ಟಡ ಕಾರ್ಮಿಕ ಇಲಾಖೆಯ ಅನುದಾನದಿಂದ ನಡೆಯುತ್ತಿರುವ ಶಿಶು ಪಾಲನಾ ಕೇಂದ್ರಗಳು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಇದೆ ಕಳೆದ ಎರಡು ಮೂರು ತಿಂಗಳುಗಳಿಂದ ಪೌಷ್ಠಿಕ ಆಹಾರಕ್ಕೆ ಅನುದಾನ ಬಂದಿಲ್ಲ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಶಿಶು ಪಾಲನಾ ಕೇಂದ್ರಮುಚ್ಚಬಾರದು ಎಂದು ಡಿಸಿ ಮೂಲಕ ಕಾರ್ಮಿಕರು ರಾಜ್ಯದ ಮುಖ್ಯಮಂತ್ರಿಗೆ
ಮನವಿ ಸಲ್ಲಿಸಿದರು.